logo
Home blue-bar Contact Us blu-bar Site Map
JANOPAKARI SRI DODDANNA SETTYY'S
S.L.N. COLLEGE OF ARTS & COMMERCE
blue_strip
Home > About Us
  about    
About Us    
 
ಶ್ರೀ ಜನೋಪಕಾರಿ ದೊಡ್ಡಣ್ಣ ಶೆಟ್ಟರವರ ಆಶಯದಂತೆ 1966ರಲ್ಲಿ ಎಸ್.ಎಲ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವನ್ನು ಎಸ್.ಎಲ್.ಎನ್ ಧರ್ಮಸಂಸ್ಥೆಯಿಂದ ಪ್ರಾರಂಭಿಸಲಾಯಿತು. ಆರ್.ಸಿ ಕಾಲೇಜು ಮತ್ತು ಸೆಂಟ್ ಜೋಸೆಪ್ ಕಾಲೇಜ್ ಆಫ್ ಕಾಮಾರ್ಸ್ ಪ್ರಾರಂಭವಾದ ಕಾಲದಲ್ಲೇ ನಮ್ಮ ಕಾಲೇಜು ಪ್ರಾರಂಭವಾಗಿದೆ. ಅತೀ ಹಳೆಯ ಮಹಾವಿದ್ಯಾಲಯ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ. ಪ್ರಾರಂಭದಿಂದ ಇಲ್ಲಿಯವರೆಗೂ ಸಾವಿರಾರು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಪದವಿಧರರಾಗಿದ್ದಾರೆ.
 

ಇಂದು ಹೆಚ್ಚುತ್ತಿರುವ ಆಧುನಿಕ ಶಿಕ್ಷಣದ ಬೇಡಿಕೆಯ ಅಂತರವನ್ನು ತಗ್ಗಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ನಮ್ಮ ಸಂಸ್ಥೆಯಿಂದ ಕಲ್ಪಿಸಿಕೊಡುವ ಸಲುವಾಗಿ ಸ್ಥಾಪಿಸಲಾಗಿದೆ. ಜ್ಞಾನವೇ ಶಕ್ತಿಯಾಗಿರುವುದರಿಂದ ಕಲಿಕೆಯ ರೂಪವನ್ನು ನಮ್ಮ ಸಂಸ್ಥೆಯ ಲೋಗೋದಿಂದ ಸೂಚಿಸಲಾಗಿದೆ.

ಶಿಸ್ತು, ಬದ್ಧತೆ, ಶ್ರೇಷ್ಠತೆಯೊಂದಿಗೆ ಜೀವನದ ಎಲ್ಲಾ ಹಂತಗಳನ್ನು ಪ್ರವೇಶಿಸಲು ವಿಧ್ಯಾರ್ಥಿಗಳನ್ನು ತಯಾರಿಸುವುದು ನಮ್ಮ ಗುರಿಯಾಗಿದೆ. ಕರ್ನಾಟಕ ಸರ್ಕಾರವು ಪ್ರತಿ 4 ವರ್ಷಗಳಿಗೊಮ್ಮೆ ಎಸ್.ಎಲ್.ಎನ್ ಧರ್ಮಸಂಸ್ಥೆಯ ಆಡಳಿತ ಮಂಡಳಿಯನ್ನು ನೇಮಕಮಾಡುತ್ತಾರೆ. ಬೆಂಗಳೂರು ವಿದ್ಯಾಲಯದಿಂದ ಶಾಶ್ವತ ಸಯೋಜನೆಗೊಳಲ್ಪಟ್ಟಿದೆ. ಯುಜಿಸಿ ಕಾಯಿದೆಯಂತೆ 2(ಎಫ್) ಮತ್ತು 12(ಃ) ರ ಅಡಿಯಲ್ಲಿ ನಿರ್ವಹಿಸಲ್ಪಡುವ ಕಾಲೇಜುಗಳ ಪಟ್ಟಿಯಲ್ಲಿ ಈ ಕಾಲೇಜು ಸೇರ್ಪಡೆಗೊಂಡಿದೆ. ನಮ್ಮ ಕಾಲೇಜನ್ನು ಯುಜಿಸಿ ಕಾಯಿದೆ 1956ರ ಅಡಿಯಲ್ಲಿ ಗುರ್ತಿಸಲ್ಪಟ್ಟಿದೆ. ಪ್ರತಿ ವರ್ಷ ನಮ್ಮ ಸಂಸ್ಥೆಯಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದೂಳಿದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಕಾಲೇಜಿನಲ್ಲಿ ಅತ್ಯಂತ ಅನುಭವಿ ಸಹಾಯಕ ಪ್ರಾಧ್ಯಾಪಕರುಗಳನ್ನು ಹೊಂದಿದೆ. ಮತ್ತು ಪ್ರತಿ ವರ್ಷ ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಕ್ರೀಡೆಗಳು ಮತ್ತು ಸಾಹಿತ್ಯ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಎನ್.ಎಸ್.ಎಸ್ ವಿಭಾಗದ ವತಿಯಿಂದ ರಾಷ್ಟ್ರ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ. ನಮ್ಮ ಕಾಲೇಜಿನ ವಿದ್ಯಾರ್ಥಿಯು ವಿಶ್ವವಿದ್ಯಾಲಯ ಕೊಡಮಾಡುವ ಚಿನ್ನದ ಪದಕಕ್ಕೂ ಭಾಜನರಾಗಿರುತ್ತಾರೆ.

 
 
 
  History
  Chairman's Message
  Vision & Mission
  Board of Management
  Committees
arro Advisory
arro L & I Education
arro Students Welfare
arro Alumini Association
arro Students Association
 
lib
 
 Contact Us bar Hostel bar Library bar  Awards & Scholarships Copyright @ 2010, All Rights reserved.
lib